ಶನಿವಾರ, ಆಗಸ್ಟ್ 18, 2018

                                                    


      ನಮಗೆ ಕೊಟ್ಟಅವಕಾಶಗಳು 
 
      ಕ್ರಿಸ್ತನು ತನ್ನ ಸಭೆಯನ್ನು ಸ್ಥಾಪಿಸಿದಾಗ, ಅಪೊಸ್ತಲರ ಕಾರ್ಯ 2ನೇ ಅಧ್ಯಾಯದಲ್ಲಿ ಬರೆದಿರುವಂತೆ “ಸಹೋದರರೇ ನಾವೇನು ಮಾಡಬೇಕು” ಎನ್ನುವ ಪ್ರಶ್ನೆಗೆ ಮೊದಲನೇ ಸಾರಿ ಯೆಹೂದ್ಯರು ಪೇತ್ರನನ್ನು ಕೇಳಿದರು ಅದರ ಪೂರ್ತಿ ಸಾರಾಂಶವನ್ನು ಓದುವುದರಲ್ಲಿ ನಮಗೆ ಎಷ್ಟೊ ಸಂತೋಷವಾಗುತ್ತದೆ. “ಪಂಚಾಶತ್ತಮ ದಿನದ ಹಬ್ಬವು ಬಂದಿರಲಾಗಿ ಅವರೆಲ್ಲರೂ ಏಕಮನಸ್ಸಿ ನಿಂದ ಒಂದೇ ಸ್ಥಳದಲ್ಲಿ ಕೂಡಿದ್ದರು. ಆಗ ಬಿರುಗಾಳಿ ಬೀಸುತ್ತದೊ ಎಂಬಂತೆ ಪಕ್ಕನೆ ಆಕಾಶದೊಳಗಿಂದ ಒಂದು ಶಬ್ಧವುಂಟಾಯಿತು ಅವರು ಕೂತಿದ್ದ ಮನೆಯನ್ನೆಲ್ಲಾ ತುಂಬಿಕೊಂಡಿತು..... (1-2) ಆ ಸಪ್ಪಳವಾದಾಗ......(6ಎ) ಆಗ ಪೇತ್ರನು ಹನ್ನೊಂದು ಮಂದಿ ಅಪೊಸ್ತಲರ ಸಹಿತ ಎದ್ದು ನಿಂತು ಗಟ್ಟಿಯಾದ ಧ್ವನಿಯಿಂದ ಅವರಿಗೆ ಹೀಗೆ ಪ್ರಸಂಗ ಮಾಡಿದನು......(14)ಇಸ್ರಾಯೇಲ್ ಜನರೇ, ನನ್ನ ಮಾತುಗಳನ್ನು ಲಾಲಿಸಿರಿ-ನಜರೇತಿನ ಯೇಸು ಇದ್ದಾನಲ್ಲಾ ದೇವರು ನಿಮಗೋ ತಿಳಿದಿರುವಂತೆ ಆತನ ಕೈಯಿಂದ ಮಹತ್ತುಗಳನ್ನೂ ಅದ್ಭುತಗಳನ್ನೂ ಸೂಚಕ ಕಾರ್ಯಗಳನ್ನೂ ನಿಮ್ಮಲ್ಲಿ ನಡೆಸಿ ಆತನನ್ನು ತನಗೆ ಮೆಚ್ಚಿಕೆಯಾದನೆಂದು ನಿಮಗೆ ತೋರಿಸಿಕೊಟ್ಟನು. ಆ ಯೇಸು ದೇವರ ಸಂಕಲ್ಪಕ್ಕೂ ಭವಿಷತ್ ಜ್ಞಾನಕ್ಕೊ ಅನುಸಾರವಾಗಿ  ಒಪ್ಪಿಸಲ್ಪಟ್ಟಿರಲು ನೀವು ಅನ್ಯ ಜನರ ಕೈಯಿಂದ ಆತನನ್ನು  ದೇವರು ಮರಣವೇದನೆಗಳಿಂದ ಬಿಡಿಸಿ ಎಬ್ಬಿಸಿದನು; ಯಾಕೆಂದರೆ ಮರಣವು ಆತನನ್ನು ಹಿಡಿದುಕೊಂಡಿರುವುದು ಅಸಾಧ್ಯವಾಗಿತ್ತು...... (22-24) ಆದ್ದರಿಂದ ನೀವು ಶಿಲುಬೆಗೆ ಹಾಕಿಸಿದ ಈ ಯೇಸುವನ್ನೇ ದೇವರು ಒಡೆಯನನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆಂಬುದು ಇಸ್ರಾಯೇಲ್ ಕುಲದವರಿಗೆಲ್ಲಾ ನಿಸ್ಸಂದೇಹವಾಗಿ ತಿಳಿದಿರಲಿ ಎಂದು ಹೇಳಿದನು. ಇದನ್ನು ಅವರು ಕೇಳಿ ಹೃದಯದಲ್ಲಿ ಅಲಗು ನೆಟ್ಟಂತಾಗಿ ಪೇತ್ರನನ್ನೂ ಉಳಿದ ಅಪೊಸ್ತಲರನ್ನೂ-ಸಹೋದರರೇ ನಾವೇನು ಮಾಡಬೇಕು? ಎಂದು ಕೇಳಲು ಪೇತ್ರನು ಅವರಿಗೆ-ನಿಮ್ಮ ಪಾಪಗಳು ಪರಿಹಾರವಗುವುದಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬನೂ ದೇವರ ಕಡೆಗೆ ತಿರಿಗಿಕೊಂಡು ಯೇಸು ಕ್ರಿಸ್ತನ ಹೇಸರಿನ ಮೇಲೆ ದೀಕ್ಷಾಸ್ನಾನ ಮಾಡಿಸಿ ಕೊಳ್ಳಿರಿ  ಆಗ ನೀವು ಪವಿತ್ರಾತ್ಮನ ದಾನವನ್ನು ಹೊಂದುವಿರಿ; ಆ ವಾಗ್ದಾನವು ನಿಮಗೂ ನಿಮ್ಮ ಮಕ್ಕಳಿಗೂ ದೂರದಲ್ಲಿರುವವರೆಲ್ಲರಿಗೂ ಅಂತೂ ನಮ್ಮ ದೇವರಾಗಿರುವ ಕರ್ತನು ತನ್ನ ಕಡೆಗೆ ಕರೆಯುವವರೆಲ್ಲರಿಗೆ ಮಾಡೋಣವಾಗಿದೆ ಎಂದು ಹೇಳಿದನು.....(36-39) ಅವನ ಮಾತಿಗೆ ಒಪ್ಪಿಕೊಂಡವರು ದೀಕ್ಷಾಸ್ನಾನ ಮಾಡಿಸಿಕೊಂಡರು......(41)ಇವರು ಅಪೊಸ್ತಲರ ಬೋಧನೆಯನ್ನು ಕೇಳುವುದರಲ್ಲಿಯೂ ಸಹೋದರರ ಅನ್ಯೋನ್ಯತೆಯಲ್ಲಿಯೂ ರೊಟ್ಟಿಮುರಿಯು ವುದರ ಲ್ಲಿಯೂ ಪ್ರಾರ್ಥನೆಗಳಲ್ಲಿಯೂ ನಿರತರಾಗಿದ್ದರು. ಎಲ್ಲರಿಗೂ ಭಯ ಉಂಟಾಯಿತು, ಇದಲ್ಲದೆ ಅನೇಕ ಅಧ್ಬುತಕಾರ್ಯಗಳೂ ಅಪೊಸ್ತಲರ ಕೈಯಲ್ಲಿನಡೆದವು...... (42-43). 

        ನಮಗೂ ಸಹ ಈ ರೀತಿಯಾದ ಅವಕಾಶಗಳು ಇಗಲೂ ಇವೆ. ಇಂತಹ ಅವಕಾಶಗಳನ್ನು ಒದಗಿಸುತ್ತಿರುವ ಕ್ರಿಸ್ತನ ಸಮಾಧಾನ ಸಂದೇಶವನ್ನು ನಾವು ಅಂಗೀಕರಿಸುತ್ತಿದ್ದೇವಾ? ಆ ಸಂದರ್ಭದಲ್ಲಿ ಕೆಲವರು ತಿರಸ್ಕರಿಸಿದರು ಆದರೆ 3000 ಜನರು ಅದನ್ನು (ಸಮಾಧಾನ ಸಂದೇಶ) ಅಂಗೀಕರಿಸಿದರು ವಾಕ್ಯವನ್ನು ಅನುಸರಿಸಿ ಈ ರೀತಿಯಾಗಿ ನಡೆದುಕೊಂಡರು.

     ಅವರು ಸುವಾರ್ತೆಯನ್ನು ಕೇಳಿದರು ಅಂದರೆ ಕ್ರಿಸ್ತನು ಶಿಲುಬೆಗೆ ಹಾಕಲ್ಪಟ್ಟನು, ಮರಣಹೊಂದಿ ಸಮಾಧಿ ಮಾಡಲ್ಪಟ್ಟು, ತಿರಿಗಿ ಎಬ್ಬಿಸಲ್ಪಟ್ಟನು. 

1. ಅವರ ಹೃದಯದಲ್ಲಿ ಅಲಗು ನೆಟ್ಟಂತಾಯಿತು.
2. ನಾವೇನು ಮಾಡಬೇಕು ಎಂದು ಕೇಳಿದರು.
3. ಸುವಾರ್ತೆ ಸಂದೇಶವನ್ನು ಅಂಗೀಕರಿಸಿದರು. 
4. ಮಾನಸಾಂತರ ಹೊಂದಿದರು.
5.ಅವರ ಪಾಪಗಳ ಕ್ಷಮಾಪಣೆಗೋಸ್ಕರ ಯೇಸುಕಿಸ್ತನ ಹೆಸರಿನಲ್ಲಿ ದೀಕ್ಷಸ್ನಾನ (ಮುಳುಗಿಸಿವುದು) ಹೊಂದಿದರು. 
6. ಪರಿಶುದ್ಧಾತ್ಮವರವನ್ನು ಹೊಂದಿದರು. 
7. ಮೂರು ಸಾವಿರ ಜನರು ಯೇಸುಕ್ರಿಸ್ತನ ಶಿಷ್ಯರ ಸಂಖ್ಯೆಯಲ್ಲಿ ಸೇರಿಸಲ್ಪಟ್ಟರು. 
8. ಅವರೆಲ್ಲರೂ ಇವುಗಳಲ್ಲಿ ನಿರತರಾಗಿದ್ದರು.
                         * ಸಹವಾಸದಲ್ಲಿಯೂ.
                         *ಪ್ರಾರ್ಥನೆಯಲ್ಲಿಯೂ.
                         *ರೊಟ್ಟಿ ಮುರಿಯುವುದರಲ್ಲಿಯೂ.
                         *ಕಾಣಿಕೆ ಕೊಡುವುದರಲ್ಲಿಯೂ.

           ಕೇಳಿದವರೆಲ್ಲರೂ ಒಂದು ತೀರ್ಮಾನವನ್ನು ತೆಗೆದುಕೊಂಡ ವಿಷಯವನ್ನು ನಾವು ಇಲ್ಲಿ ಗಮನಿಸಬಹುದು. ಆ ನಿರ್ಣಯವು ಅಂದರೆ ಸಮಾಧಾನ ಸಂದೇಶ ಸುವಾರ್ತೆಯನ್ನು ಅಂಗೀಕರಿಸುವುದಾಗಿರಬಹುದು ಅಥವಾ ತಿರಸ್ಕರಿಸುವು ದಾಗಿರ ಬಹುದು ಯಾವುದೊಂದು ಅಗಿರಬಹುದು. ಈ ಸಮಾಧಾನ ಸಂದೇಶ ಸುವಾರ್ತೆ ಯನ್ನು ಕೇಳುವುದಕ್ಕೆ ನಾವು ಈ ದಿನ ನಮಗೆ ಅನೇಕ ಮಾರ್ಗಗಳಿವೆ. ಕೆಲವರು ಆಸಕ್ತಿಯಿಂದ ಬೈಬಲ್ ಓದುವುದರ ಮೂಲಕ ಅಥವಾ ಬೇರೊಬ್ಬ ಸಹಾಯದಿಂದ ಬೈಬಲ್‍ನ್ನು ಪರಶೀಲಿಸುವುದರ ಮೂಲಕ ಅಥವಾ ಇಂಟರ್‍ನೆಟ್ ಮೂಲಕ, ಪತ್ರಿಕೆಗಳು, ಬೈಬಲ್ ತರಗತಿಗಳ ಮೂಲಕ ಸುವಾರ್ತೆ ಸಂದೇಶವನ್ನು ತಿಳಿದು ಕೊಳ್ಳುತ್ತಿದ್ದೇವೆ. ಕ್ರಿಸ್ತನ ಸುವಾರ್ತೆಯನ್ನು ಕೇಳಿದವರು ಅಥವಾ ಶಿಷ್ಯರಾಗಿ ಅನುಸರಿಸುವವರು, ರಕ್ಷಣೆಹೊಂದುವಷ್ಟು ವಿಶ್ವಾಸ ಅವರಲ್ಲಿ ಉಂಟಾದಾಗ ಅವರು ನೀರಿನಲ್ಲಿ ಮುಳಿಗಿಸುವುದರ ಮೂಲಕ ದೀಕ್ಷಾಸ್ನಾನ ಹೊಂದಿ ಅವರ ಪಾಪಗಳಿಗೆ ಕ್ಷಮಾಪಣೆ ಹೊಂದುವ ಅವಕಾಶವನ್ನು ದೇವರು ಕಲ್ಪಿಸುತ್ತಿದ್ದಾನೆ.


                                                                       ವಂದನೆಗಳು  


ಮಂಗಳವಾರ, ಆಗಸ್ಟ್ 14, 2018



 

                            ಸಭೆಯ ಆರಾಧನೆ
 

         ಸಭೆಯು ರಕ್ಷಣೆ ಹೊಂದಿದವರ ಸಮೋಹವಾಗಿದೆ. ಯೇಸು ಕ್ರಿಸ್ತನ ಮೂಲಕ ದೇವರನ್ನು ಸೇವಿಸಿ ಆರಾಧಾಸುವದೇ ಅದರ ಪ್ರಮುಖ ಉದ್ದೇಶವಾಗಿದೆ. ಪೌಲನು ಹೀಗೆ ಹೇಳಿದ್ದಾನೆ “ನೀವು ನುಡಿಯಿಂದಾಗಲಿ, ನಡೆಯಿಂದಾಗಲಿ ಏನು ಮಾಡಿದರು ಅದೆಲ್ಲವನ್ನು ಕರ್ತನಾದ ಯೇಸುವಿನ ಹೆಸರಿನಲ್ಲಿಯೇ ಮಾಡಿರಿ. ಆತನ ಮೂಲಕ ತಂದೆಯಾದ ದೇವರಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸಿರಿ” (ಕೊಲೊಸ್ಸೆ 3;17).

 

  ಹೊಸ ಒಡಂಬಡಿಕೆಯಲ್ಲಿ ಮೂರು ವಿಧವಾದ ಆರಾಧನೆ ಕಾಣಿಸುತ್ತವೆ. ಮೊದಲನೆಯದು. 

1.ತಿಳಿಯದ ಆರಾಧನೆ:

       ಪೌಲನು ಅಥೇನೆ ಪಟ್ಟಣದಲ್ಲಿರು ಅನೇಕ ವಿಗ್ರಹಗಳನ್ನು ನೋಡಿ ಹೀಗೆ ಹೇಳಿದ್ದಾನೆ “ಅಥೇನೆಯ ಜನರೇ, ನೀವು ಎಲ್ಲಾದರಲ್ಲೂ ಅತಿ ಭಕ್ತಿವಂತರೆಂದು ನನಗೆ ತೋರುತ್ತದೆ. ನಾನು ನಿಮ್ಮ ಪಟ್ಟಣದಲ್ಲಿ ತಿರುಗಾಡುತ್ತಾ ನೀವು ಪೂಜಿಸುವ  ದೇವತಾ ಪ್ರತಿಮೆಗಳನ್ನು ಚೆನ್ನಾಗಿ ನೋಡುತ್ತಾ ಇದ್ದಾಗ ಒಂದು ಬಲಿಪೀಠವು ನನ್ನ ಕಣ್ಣಿಗೆ ಬಿತ್ತು; ಅದರ ಮೇಲೆ ತಿಳಿಯದ ದೇವರಿಗೆ ಎಂದು ಬರೆದಿತ್ತು. ಆದಕಾರಣ ನೀವು ಯಾವುದನ್ನು ತಿಳಿಯದೆ ಪೂಜಿಸುತ್ತೀರ ಅದನ್ನೇ ನಿಮಗೆ ತಿಳಿಯಪಡಿಸುತ್ತೇನೆ” (ಅ.ಕೃ.17:23). ತಿಳಿಯದ ದೇವರಿಗೆ ಆರಾಧನೆ ಮಾಡುವವರು ಅಂದು, ಇಂದು ಸಹ ಕೆಲವರು ಇದ್ದಾರೆ. ಲಕ್ಷಗಟ್ಟಲೇ ಜನರು ವಿಗ್ರಹಗಳಿಗೆ, ಮೂರ್ತಿಗಳಿಗೆ ನಮಸ್ಕರಿಸುವುದು ಮಾತ್ರವಲ್ಲದೇ ಸಾವಿರಗಟ್ಟಲೇ ಜನರು ವಾಕ್ಯಗಳನ್ನು ತಿಳಿಯದ ಅನೇಕ ಮತ ಸಮಪ್ರಾದಯ ಪದ್ಧತಿಗಳನ್ನು ಮಾಡುವವರಿದ್ದಾರೆ.

೨.  ವ್ಯರ್ಥ ಆರಾಧನೆ:

            ವ್ಯರ್ಥ ಆರಾಧನೆಯನ್ನು ಕುರಿತು ಬೈಬಲ್ ಬೋಧಿಸುತ್ತದೆ. “ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನೇ ಅವರು ಬೋಧಿಸುವದರಿಂದ ನನಗೆ ಭಕ್ತಿ ತೋರಿಸುವದು ವ್ಯರ್ಥ ಎಂಬದೇ” (ಮತ್ತಾಯ 15:9) ಎಂದು ಯೇಸು ಕ್ರಿಸ್ತನು ಹೇಳಿದ್ದಾನೆ. ಪ್ರಜೆಗಳಲ್ಲಿ ಅನೇಕರು ಇಂದು ದೇವರನ್ನು ವ್ಯರ್ಥವಾಗಿ ಆರಾಧಿಸುತ್ತಿದ್ದಾರೆ. ಅವರು ಕರ್ತತನನ್ನೇ ಆರಾಧಿಸುವರು ಎಂಬ ಮಾತು ಸತ್ಯವಾಗಿದ್ದರು, ಅವರ ಆರಾಧನೆ ದೇವರ ಚಿತ್ತಾನುಸಾರವಾಗಿ ಇಲ್ಲವಾದ್ದರಿಂದ, ಮನುಷ್ಯ ಕಲ್ಪಿತ ಸಿದ್ಧಾಂತಗಳ  ಅನುಗುಣವಾಗಿ ಬೋಧಿಸುವದು, ಅದರ ಪ್ರಕಾರ ಮಾಡುವುದೆಲ್ಲ ವ್ಯರ್ಥ. ಅಂಹದರ ಪ್ರಯೋಜನ ಕೇವಲ ಶೊನ್ಯ.
  ೩. ಸತ್ಯ ಆರಾಧನೆಯನ್ನು:

          ಸತ್ಯ ಆರಾಧನೆಯನ್ನು ಕುರಿತು ಬೈಬಲ್ ಹೇಳಿತ್ತದೆ. ಅದು ಆತ್ಮದಿಂದಲೂ, ಸತ್ಯದಿಂದಲೂ ಮಾಡುವಂತದ್ದು. “ದೇವರು ಆತ್ಮ ಸ್ವರೂಪನು; ಆತನನ್ನು ಆರಾಧಿಸುವವರು ಆತ್ಮೀಯ ರೀತಿಯಲ್ಲಿ, ಸತ್ಯಕ್ಕೆ ತಕ್ಕ ಹಾಗೆ ಆರಾಧಿಸಬೇಕು” (ಯೋಹಾನ 4:24) ಎಂದು ಯೇಸು ಹೇಳಿದ್ದಾನೆ. ದೇವರು ಅಂಗೀಕರಿಸುವ  ಆರಾಧನೆ ಇಂಹದ್ದು ಮಾತ್ರವೇ. ಆತ್ಮದಿಂದ ದೇವರ ಕಡೆಗೆ ನಡೆಸುವ ಆರಾಧನೆ ಇದು. ವಿನಯದಿಂದಲೂ, ಭಕ್ತಿಭಾವದಿಂದಲೂ ಸತ್ಯವಾಕ್ಯವನ್ನು ಅನುಸರಿಸಿ ಮಾಡುವ ಆರಾಧನೆ ಇದು. ಆರಾಧನೆ ಮಾಡಬೇಕೆಂದು ದೇವರು ಯಾರನ್ನು ಬಲವಂತ ಮಾಡುವದಿಲ್ಲ. ಆದರೆ ಆತನನ್ನು ಆರಾಧಿಸುವವರು ಆತನು ಕೋರುವ ರೀತಿಯಲ್ಲಿ ಆರಾಧಿಸಬೇಕೆಂದು ಅಪೇಕ್ಷಿಸುತ್ತಿದ್ದಾನೆ.

   ಕ್ರಿಸ್ತನ ಸಭೆಯು ಎಂತಹ ಆರಾಧನೆ ಮಾಡಬೇಕು? 

    ಅದು ತಿಳಿಯದ ಆರಾಧನೆ? ಅಲ್ಲವೇ ಅಲ್ಲ. ಮಾನವ ಕಲ್ಪಿತ ಬೋಧನೆಗಳನ್ನು ಅನುಸರಿಸುವ ಆರಾಧನೆ? ಖಂಡಿತ ಅಲ್ಲ. ಆದರೆ ಅದು ಆತ್ಮದಿಂದಲೂ, ಸತ್ಯದಿಂದಲೂ ಮಾಡುವ ದೇವರು ಅಂಗೀಕರಿಸುವಂತಹದ್ದು. ನಾವು ಹೊಸ ಒಡಂಬಡಿಕೆಯನ್ನು ಓದುತ್ತಿರುವಾಗ ಅದರಲ್ಲಿರುವ ಆಜ್ಞೆಗಳ ಪ್ರಕಾರ, ಮಾದರಿಯ ಪ್ರಕಾರ. ಪ್ರಾರಂಭದ ಕ್ರೈಸ್ತರು ಈ ಕೆಳಗಿನ 5 ಅಂಶಗಳನ್ನು ಆರಾಧನೆಯಲ್ಲಿ ಮಾಡಿದರೆಂದು ನಾವು ಕಾಣುತ್ತವೆ.

1.ವಾಕ್ಯವನ್ನು ಓದುವದಕ್ಕೆ ಅವರು ಸೇರಿಬಂದಿದ್ದರು:

       ದೇವರ ವಾಕ್ಯಗಳನ್ನು ತಿಮೊಥೆಯನು ಮೊದಲಿನಿಂದಲೂ ಕೇಳಿದ್ದರು “ನೀನು ದೇವರ ದೃಷ್ಟಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವದಕ್ಕೆ ಪ್ರಯಾಸಪಡು. ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವನೂ ಆಗಿರು” (2ತಿಮೊಥೆ 2:15) ಎಂದು ಪೌಲನು ತಿಮೊಥೆಯನ್ನು ಎಚ್ಚರಿಸುತ್ತಾನೆ. ಇದು ಎಲ್ಲಾ ಕ್ರೈಸ್ತರಿಗೂ ಮುಖ್ಯವಾಗಿ ಆರಾಧನೆಗೆ ಸೇರಿಬಂದವರಿಗೆ ಅನ್ವಯಿಸುತ್ತದೆ.  ವಾಕ್ಯದ ಮೂಲಕ ದೇವರು ತನ್ನ ಮಕ್ಕಳೊಂದಿಗೆ ಮಾತನಾಡುವ ಸಮಯವಿದು. ಅಪೂಸ್ತಲರ ಕೃತ್ಯಗಳು20:7ರಲ್ಲಿ ಸಭೆಯವರಿಗೆ ಪೌಲನು ಪ್ರಸಂಗ ಮಾಡುವದರ ಮೂಲಕ ವಾಕ್ಯವನ್ನು ಬೋಧಿಸಿದಂತೆ ನಾವು ಗ್ರಹಿಸಬಹುದು.

2.  ಅವರು ಪ್ರರ್ಥನೆ ಮಾಡಿದರು. ಪಂಚಶತ್ತಮ ದಿನದಂದು ಸುವಾರ್ತೆಗೆ ಒಳಗಾದವರು:

 “ಇವರು ಅಪೋಸ್ತಲರ ಬೋಧನೆಯನ್ನು ಕೇಳುವದರಲ್ಲಿಯೂ, ಸಹೋದರರ ಅನ್ಯೋನತೆಯಲ್ಲಿಯೂ, ರೊಟ್ಟಿಮುರಿಯುವದರಲ್ಲಿಯೂ, ಪ್ರಾರ್ಥನೆಗಳಲ್ಲಿಯೂ ನಿರತರಾಗಿದ್ದರು” (ಅ.ಕೃ.2:42). ಪ್ರಾರ್ಥನೆಯ ಮೂಲಕ ದೇವರ ಮಕ್ಕಳು ಪರಲೋಕದಲ್ಲಿರು ತಂದೆಯೊಂದಿಗೆ ಮಾತನಾಡುವ ಅವಕಾಶ ದೊರೆಯುತ್ತದೆ. ಕ್ರೈಸ್ತರು ಆರಾಧನೆಗೆ ಕೂಡಿ ಬಂದಾಗ ಪ್ರಾರ್ಥನೆ ಮಾಡದಂತೆ ಏನನೂ  ಮಾಡುವದಿಲ್ಲ.

3.  ಅವರು ಕೀರ್ತನೆಗಳನ್ನು ಹಾಡಿದರು:

     ಪೌಲನು ತನ್ನ ಸಹೋದರರಿಗೆ ಹೀಗೆ ಬರೆದನು “ಆದರೆ ಪವಿತ್ರತ್ಮಭರಿತರಾಗಿದ್ದು ಕೀರ್ತನೆಗಳಿಂದಲೂ ಆತ್ಮ ಸಂಬಂಧವಾದ ಪದಗಳಿಂದಲೂ ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಾ ನಿಮ್ಮ ಹೃದಯಗಳಲ್ಲಿ ಕರ್ತನಿಗೆ ಗಾನಮಾಡುತ್ತಾ ಕೀರ್ತನೆ ಹಾಡುತ್ತಾ ಯಾವಾಗಲೂ ಎಲ್ಲಾ ಕಾರ್ಯಗಳಿಗೋಸ್ಕರ ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ತಂದೆಯಾದ ದೇವರಿಗೆ ಸ್ತೋತ್ರ ಮಾಡುತ್ತಾ...” (ಎಫೆಸ 5:19). ಮತ್ತು ಕೊಲೊಸ್ಸೆ3:16, ಇಬ್ರಿಯ 13:15 ಗಳನ್ನು ಓದು. ಸಂಗೀತದಲ್ಲಿ ಎರಡು ವಿಧ ಇದೆ. ಒಂದು ಗಾತ್ರ ಸಂಗೀತ, ಮತ್ತೊಂದು ವಾದ್ಯ ಸಂಗೀತ. ಆದರೆ ದೇವರು ಕೋರುವ ಸಂಗೀತ ಯಾವುದು? ನಾವು ಹೃದಯಲ್ಲಿ ಕರ್ತನಿಗೆ ಗಾನಮಾಡಬೇಕೆಂದು ವಾಕ್ಯವು ಹೇಳುತ್ತದೆ. ಅದ್ದರಿಂದ ವಾದ್ಯ ಸಂಗೀತವನ್ನು ಪ್ರಾರಂಭದ ಕ್ರೈಸ್ತರು ಉಪಯೋಗಿಸಿಲ್ಲ, ಅವರು ಕೇವಲ ತಮ್ಮ ಭಾಯಿಯಿಂದ ದೇವರಿಗೆ ಸ್ತುತಿಗಾನ ಮಾಡಿದರು. ಅನೇಕ ಶತಾಮಾನಗಳ ನಂತರ ಮನುಷ್ಯರು ಆರಾಧನೆಯಲ್ಲಿ ವಾದ್ಯಗಳನ್ನು ಉಪಯೋಗಿಸುವದನ್ನು ಪ್ರಾರಂಭಿಸಿದರು. ಇದನ್ನು ದೇವರು ಏರ್ಪಡಿಸಲಿಲ್ಲ. ದೇವರು ಅದನ್ನು ಅಂಗೀಕರಿಸುವದಿಲ್ಲ. ಕ್ರೈಸ್ತರು ವಾದ್ಯ ಸಂಗೀತದಿಂದ ಆರಾಧನೆ ಮಾಡಿ ದೇವರನ್ನು ಸ್ತುತಿಸಲಿಲ್ಲ.

4.  ಅವರು ಕರ್ತನ ಭೋಜನದಲ್ಲಿ ಪಾಲುಗಾರರಾಗಲು ಕೊಡಿಬಂದಿದ್ದರು:

      ಅ.ಕೃ.20:7ರಲ್ಲಿ ಇದರ ಮಾದರಿ ನಮಗೆ ಕಾಣುತ್ತದೆ. ಮತ್ತಾಯ 26:26-28; 1ಕೊರಿಂಥ 11ನೇ ಅಧ್ಯಾಯದಲ್ಲಿ ರೊಟ್ಟಿಯನ್ನು ಯೇಸುಕ್ರಿಸ್ತನ ದೇಹಕ್ಕ ಸಾದೃಸ್ಯವಾಗಿಯೂ, ದ್ರಾಕ್ಷರಸವು ಆತನ ರಕ್ತಕ್ಕೆ ಸಾದೃಸ್ಯವಾಗಿಯೂ ಮಾಡಬೇಕೆಂದು ಬರೆಯಲ್ಪಟ್ಟಿದೆ. ಇಂದು ನಾವು ಸಹ ಇದನ್ನು ಹೀಗೆ ಮಾಡಬೇಕು.

5.  ಅವರು ಕಾಣಿಕೆಗಳನ್ನು ಕೊಟ್ಟರು:

        ಗಲಾತ್ಯದಲ್ಲಿಯೂ, ಕೊರಿಂಥದಲ್ಲಿಯೂ ಇರುವ ಸಹೋದರರಿಗೆ ಪೌಲನು ಹೀಗೆ ಬರೆದನು “ನಾನು ಬಂದಾಗ ಹಣ ವಸೂಲು ಮಾಡಬೇಕಾದ ಅವಶ್ಯವಾಗದಂತೆ ನಿಮ್ಮಲ್ಲಿ ಪ್ರತಿಯೊಬ್ಬನು ತನಗೆ ಬಂದ ಸಂಪಾದನೆಯ ಮೇರೆಗೆ ವಾರವಾರದ ಮೊದಲೆನೆಯ ದಿನದಲ್ಲಿ ಗಂಟುಮಾಡಿ ತನ್ನ ಮನೆಯಲ್ಲಿಟ್ಟುಕೊಂಡಿರಬೇಕು” (1ಕೊರಿಂಥ 16:2). 2ಕೊರಿಂಥ 9:7ನ್ನು ಸಹ ಓದು.

       ಪ್ರಾರಂಭದ ಕ್ರೈಸ್ತರು ದೇವರನ್ನು ಆರಾಧಿಸುವದಕ್ಕೆ ವಾರದ ಮೊದಲನೆಯ ದಿನದಲ್ಲಿ ಕೂಡಿಬಂದಿದ್ದರು (ಅ.ಕೃ.20:7; 1ಕೊರಿಂಥ 16:2). “ಸಭೆಯಾಗಿ ಕೂಡಿಕೊಳ್ಳುವದನ್ನು ಕೆಲವರು ರೂಡಿಯಾಗಿ  ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಎಚ್ಚರಿಸೋಣ. ಕರ್ತತನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ನೋಡುವದರಿಂದ ಇದನ್ನು ಮತ್ತಷ್ಟು ಮಾಡಿರಿ” (ಇಬ್ರಿಯ 10:25). ಇಂದಿನ ಕ್ರೈಸ್ತರು ಸಹ ವಾರದ ಮೊದಲನೆಯ ದಿನ ಅಂದರೆ ಭಾನುವಾರ ದಿನದಂದು ಆರಾಧನೆ ಮಾಡಬೇಕು ಅದ್ದರಿಂದ ಈ ಎಚ್ಚರಿಕೆ ಇಂದಿನ ಕ್ರೈಸ್ತರಾದ ನಮಗೂ ಅನ್ವಯಿಸುತ್ತದೆ.

      ಸಭೆಯ ಆರಾಧನೆ ಬಹಳ ಸುಲಭವಾದ್ದದು, ಸೂಕ್ಷ್ಮವಾದ್ದದು. ಆದುದರಿಂದ ಅನೇಕರು ಪೂಜೆಗಳಿಂದಲೂ, ಪುನಸ್ಕಾರಗಳಿಂದಲೂ, ಮನುಷ್ಯ ಕಲ್ಪಿತ ಆಚರಣೆಗಳಿಮದಲೂ, ಆಡಂಬರದಿಂದಲೂ ಇರಬೇಕೆಂದು ಆಲೊಚಿಸಿಕೊಳ್ಳುತ್ತಾರೆ. ಆದರೆ ಅದು ಹಾಗಲ್ಲ. ಆರಾಧನೆಯನ್ನು ಕುರಿತು ದೇವರು ತನ್ನ ಚಿತ್ತವನ್ನು ತನ್ನ ಗ್ರಂಥದ ಮೂಲಕ ನಮಗೆ ತಿಳಿಸಿದ್ದಾನೆ. ಅದನ್ನು ನಾವು ಸ್ವಲ್ಪವಾದರೂ ಬದಲಾಯಿಸುವದಕ್ಕೆ ಮನುಷ್ಯನಿಗೆ ಅಧಿಕಾರವಿಲ್ಲ. ದೇವರ ಶಾಪಕ್ಕೆ ಗುರಿಯಾಗದಂತೆ ಅದಕ್ಕೆ ಸೇರಿಸುವುದಾಗಲಿ, ಅದರಿಂದ ತೆಗೆದು ಹಾಕುವದಾಗಲಿ ಮಾಡಬಾರದು. ದೇವರು ಮಾತನಾಡಿರುವದರಿಂದ ಆತನ ಜನರು ಆತನಿಗೆ ವಿಧೇಯರಾಗಬೇಕು ಆಗ ಮಾತ್ರವೇ ನಾವು ದೇವರನ್ನು ಸ್ತುತಿಸಿ, ಮಹಿಮೆಪಡಿಸಿ ಆರಾಧಿಸಬಹುದು.
                                                               
                                                                        ವಂದನೆಗಳು 



ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ 
ಕ್ರಿಸ್ತನ ಸಭೆ 
ಸಂಗನಕಲ್ಲು 
ಸೆಲ್: ೯೭೩೯೪೦೮೭೨೭.


ಸೋಮವಾರ, ಆಗಸ್ಟ್ 6, 2018

                                 


                 ದೈವ  ಗ್ರಂಥವೆಂದು ಗುರ್ತಿಸುವುದು ಹೇಗೆ?

    ಪ್ರಪಂಚದ ಗ್ರಂಥಗಳಲ್ಲಿ ದೈವ ಗ್ರಂಥ ಎಂದು ಗುರ್ತಿಸಬೇಕಾದರೆ,  ಎಲ್ಲರೂ ಒಪ್ಪಿಕೊಳ್ಳುವಂಥ  ಈ ಆರು ಪ್ರಾಮಾಣಿಕ ಸಂಗತಿಗಳನ್ನು ಕಾಲಮಾನವಾಗಿ ತೆಗೆದುಕೊಂಡು ಪರಿಶೀಲಿಸಬೇಕು. 

೧. ದೇವರ ಇರುವಿಕೆ ಮತ್ತು ಆತನ ಉಪದೇಶ ಒಳಗೊಂಡಿರಬೇಕು. 

೨.ಭವಿಷ್ಯವನ್ನುಕುರಿತು  ಮುಂದಾಗಿಯೇ ತಿಳಿಸಲ್ಪಟಿರಬೇಕು .

೩.ಪ್ರಪಂಚ ದೇಶಗಳ ಮತ್ತು ಪ್ರಜೆಗಳ ಚರಿತ್ರೆಯನ್ನು ಒಳಗೊಂಡಿರಬೇಕು . 

೪. ಪೂರ್ತಿಯಾಗಿ ಶಾಸ್ತ್ರೀಯ ಆಧಾರಗಳಿಂದ ಇರಬೇಕು. 

೫.ಲಾಜಿಕಾಗಿ ಯಾವ ಲೋಪವಿಲ್ಲದೆ ಇರಬೇಕು. 

೬.ಮನುಷ್ಯನ ಜೀವನ ವಿಧಾನ, ಮತ್ತು ನೈತಿಕಯ  ನೆಲೆಯನ್ನು ಸ್ಪಷ್ಟವಾಗಿ ತಿಳಿಸುವಂತಿರಬೇಕು. 

     ಈ ಆರು ವಿಷಯಗಳು ಪ್ರಮಾಣಿಕವಾಗಿ ತೆಗೆದುಕೊಂಡು ಮತ್ತು ಇವುಗಳನ್ನು ಆಧಾರವಾಗಿಟ್ಟುಕೊಂಡು ಆಯಾ ಗ್ರಂಥಗಳನ್ನು ಪರಿಶೀಲಿಸಿದರೆ ಆಗ ಯಾವುದು ನಿಜವಾದ ದೈವ ಗ್ರಂಥ ಎಂದು ಸುಲಭವಾಗಿ  ಗುರ್ತಿಸಬಹುದು. 

ಈ ೬೬ ಪುಸ್ತಕಗಳುಳ್ಳ ಬೈಬಲ್ ಮಾತ್ರವೇ ದೈವ ಗ್ರಂಥ......  ಎಂದು ನಮಗೆ ೨ತಿಮೊಥೆ ೩:೧
೬-೧೭, ೨ಪೇತ್ರ೧:೨೦-೨೧ರಆಧಾರಗಳಿಂದ ನಂಬುತ್ತೇವೆ. ಆದರೆ ಲೋಕವು ಸಹ ನಂಬಬೇಕಾದರೆ ಹೊರಗಡೆಯ ಆಧಾರಗಳನ್ನು ಖಂಡಿತವಾಗಿ ಹೇಳಬೇಕು.